Posts

Showing posts from July, 2023

ರಾಜ್ಯ ಸರ್ಕಾರಕ್ಕೆ ಪಂಚ ಗ್ಯಾರಂಟಿಗಳ ಹೊರೆ: 2023-24ನೇ ಸಾಲಿನ ಸಾಲದ ಸ್ಥಿತಿಗತಿ ಹೀಗಿದೆ..

ಜುಲೈ 7ರಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ರಾಜ್ಯದ ಸಾಲದ ಸ್ಥಿತಿಗತಿ ಹಾಗೂ ಮುಂದೆ ಸಾಲದ ಎತ್ತುವಳಿ ಹೇಗಿರಲಿದೆ ಎಂಬ ಚಿತ್ರಣ ಇಲ್ಲಿದೆ. ಬೆಂಗಳೂರು: ಪಂಚ ಗ್ಯಾರಂಟಿಗಳ ಬೃಹತ್ ಹೊರೆಯ ಮಧ್ಯೆ ಸಿಎಂ ಸಿದ್ದರಾಮಯ್ಯ ಬಜೆಟ್​ಗೆ (2023-24) ಸಿದ್ಧತೆ ನಡೆಸುತ್ತಿದ್ದಾರೆ. ತಮ್ಮ ನೇತೃತ್ವದ ನೂತನ ಸರ್ಕಾರದ ಹೊಸ ಬಜೆಟ್ ಮಂಡನೆಯ ತಯಾರಿಯಲ್ಲಿ ಅವರಿದ್ದಾರೆ.‌ ಇದು ಮುಂದಿನ 9 ತಿಂಗಳ ಅವಧಿಗೆ ಪೂರ್ಣ ಪ್ರಮಾಣದ ಬಜೆಟ್ ಆಗಿರಲಿದೆ.‌ ನಿರ್ಗಮಿತ ಬಿಜೆಪಿ ಸರ್ಕಾರ 2023-24ನೇ ಸಾಲಿನ‌ ಬಜೆಟ್ ಮಂಡಿಸಿತ್ತು. ಬೊಮ್ಮಾಯಿ ಮಂಡಿಸಿದ್ದ ಬಜೆಟ್​ನಲ್ಲಿ 2023- 24ರಲ್ಲಿ ಅಂದಾಜು 77,750 ಕೋಟಿ ರೂ ಸಾಲ ಮಾಡುವುದಾಗಿ ತಿಳಿಸಿದ್ದರು.‌ ಇದೀಗ ಹೊಸ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಪಂಚ ಗ್ಯಾರಂಟಿಯೇ ದೊಡ್ಡ ಹೊರೆಯಾಗಿದೆ. ಹೊಸ ಬಜೆಟ್‌ನಲ್ಲಿ ಇವುಗಳಿಗೆ ಹಣ ಹೊಂದಿಸುವುದು ದೊಡ್ಡ ಸವಾಲು.‌ ಈ ಬಾರಿಯ ಬಜೆಟ್​ನಲ್ಲಿ ಸಿದ್ದರಾಮಯ್ಯ ಸರ್ಕಾರವು ಬೊಮ್ಮಾಯಿ ಸರ್ಕಾರ ಅಂದಾಜಿಸಿದ ಸಾಲದ ಮಿತಿಯಲ್ಲೇ ಇರಲಿದ್ದಾರೆ ಎನ್ನಲಾಗಿದೆ. ಆರ್ಥಿಕ ವರ್ಷದ ಒಂಬತ್ತು ತಿಂಗಳ ಹೊಸ ಬಜೆಟ್​ನಲ್ಲಿ ಸಿದ್ದರಾಮಯ್ಯ ಹೆಚ್ಚಿನ ಸಾಲದ ಮೊರೆ ಹೋಗುವುದು ಅನುಮಾನ ಎಂದು ಆರ್ಥಿಕ ಇಲಾಖೆಯ ಮೂಲಗಳು ತಿಳಿಸಿವೆ.‌ ಸಾಲದ ಸ್ಥಿತಿಗತಿ: ಆರ್ಥಿಕ ವರ್ಷದ ಏಪ್ರಿಲ್- ಜೂನ್ ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ದೊ...